|

Inviting Articles for JNVH Silver Jubilee Magazine

ಗೆಳೆಯರೇ,

ನಮ್ಮ ಶಾಲೆಯ ಬೆಳ್ಳಿ ಮಹೋತ್ಸವದ ಅಂಗವಾಗಿ, ಒಂದು ಪುಸ್ತಕವನ್ನು ಹೊರತರುತಿದ್ದೇವೆ. ಇದರ ಉದ್ದೇಶ ೨೫ ವರ್ಷಗಳ ಆಗು ಹೋಗುಗಳು, ಹಿರಿಮೆ ಹಾಗೂ ಸವಿ ನೆನಪುಗಳನ್ನು ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡುವ ಒಂದು ಪ್ರಾಮಾಣಿಕ ಪ್ರಯತ್ನ. ಇದಕ್ಕಾಗಿ ನಿಮ್ಮ ಸಹಾಯ ಅತ್ಯಗತ್ಯ. ಶಾಲೆಯ ಯಾವುದೇ ಹಳೆಯ ವಿದ್ಯಾರ್ಥಿಯು ಪುಸ್ತಕಕ್ಕಾಗಿ ಏನಾದರು ಬರೆಯಲು ಇಚ್ಛಿಸುವಲ್ಲಿ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಬರೆಯಲು ಅವಕಾಶವಿದೆ. ಕಥೆ, ಕವನ/ಹನಿಗವನ, ಚುಟುಕು, ಹಾಸ್ಯ,..... ಮನಸ್ಸಿಗೆ ಹಿಡಿಸಿದ್ದನ್ನು ಹಿಂದೆ ಹೇಳಿದ ಯಾವುದೇ ಭಾಷೆಯಲ್ಲಿ ಬರೆಯಬಹುದಾಗಿದೆ. ಅಷ್ಟೇ ಅಲ್ಲ ವ್ಯಂಗ್ಯಚಿತ್ರ, ನಿಮ್ಮ ಕೈಯ್ಯಾರೆ ಅರಳಿದ ಚಿತ್ರಕಲೆ, ಸ್ವತಃ ತೆಗೆದ ಅಂದವಾದ ಅಪರೂಪದ ಛಾಯಾಚಿತ್ರ ಏನೇ ಇದ್ದರೂ ಅದನ್ನೂ ಸಹ ಪುಸ್ತಕದಲ್ಲಿ ಮುದ್ರಿಸಲಾಗುವುದು. ನೀವು ಆಸಕ್ತಿ ಹೊಂದಿದ ಯಾವುದೇ ವಿಷಯಗಳಾದ ರಾಜಕೀಯ, ವಿಜ್ಞಾನ, ವೈದ್ಯಕೀಯ, ಇತಿಹಾಸ, ತಂತ್ರಜ್ಞಾನ, ಕಲೆ, ಸಂಸ್ಕೃತಿ, ಕ್ರೀಡೆ, ಹಾಸ್ಯ, ವಾಣಿಜ್ಯ, ಮತ್ತು ಷೇರು ಜಗತ್ತು,........ ಇಂತಹುಗಳದರ ಬಗ್ಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ನೀವು ಕೂಡಿಟ್ಟ ಅಪರೂಪದ ವಸ್ತುವಿನ ಬಗ್ಗೆ, ಖುಷಿ ಕೊಟ್ಟ ಒಳ್ಳೆಯ ಪುಸ್ತಕದ ವಿಮರ್ಶೆ, ಚರ್ಚೆ, ಪ್ರಬಂಧ, ಶಾಲೆಯ ಅನುಭವ, ಮಧ್ಯಪ್ರದೇಶಕ್ಕೆ ಹೋದಾಗಿನ ಶೈಕ್ಷಣಿಕ ಪ್ರವಾಸದ ಮರೆಯಲಾಗದ ಪ್ರಸಂಗಗಳು, ವಿದೇಶಯಾನದ ಕಣ್ಣಿಗೆ ಕಟ್ಟುವ ಗಳಿಗೆಗಳು, ಕಾಲೇಜಿನಲ್ಲಿ ಓದದಿದ್ದರೂ ಕೆಲಸ ಗಿಟ್ಟಿಸಿದ ಬಗೆ, ಪರೀಕ್ಷೆಯ ಹಿಂದಿನ ದಿನದ ಓದು, ತಮ್ಮ ಪ್ರಿಯತಮ/ಪ್ರೇಯಸಿ,........ ಇನ್ನೂ ಹತ್ತು ಹಲವು ವಿಷಯಗಳ ಬಗ್ಗೆ ಬರೆಯಬಹುದಾಗಿದೆ. ಬರವಣಿಗೆಯು ನಿಮ್ಮ ಪರಿಕಲ್ಪನೆಗೆ ಬಿಟ್ಟಿದ್ದಾಗಿದೆ. ನೀವು ಆಯ್ಕೆ ಮಾಡಿದ ಯಾವುದೇ ವಿಷಯವನ್ನು ಸೊಗಸಾಗಿ ವ್ಯಾಕರಣಶುಧ್ಧವಾಗಿ ನಮಗೆ ಬರೆದು ಕಳುಹಿಸಿ.

ಹೊರತರುತ್ತಿರುವ ಪುಸ್ತಕಕ್ಕೆ ಇನ್ನೂ ಹೆಸರಿಟ್ಟಿಲ್ಲ. ನೀವೆಲ್ಲರೂ ಕೂಡಿ ಸೂಚಿಸಿದ ಒಂದು ಒಪ್ಪುವ ಹೆಸರನ್ನು ಪುಸ್ತಕಕ್ಕಿಡಲಾಗುವುದು. ಪುಸ್ತಕದ ಹೆಸರು ಅತೀ ಮುಖ್ಯ, ಆದರೆ ಅದಕ್ಕಿಂತಲೂ ಮುಖ್ಯವಾದುದು ಪುಸ್ತಕದ ಒಳಗೆ ಮುದ್ರಿತಗೊಳ್ಳುವ ವಿಷಯದ ಸಾರ. ಹಾಗಾಗಿ ಸದ್ಯಕ್ಕೆ ಪುಸ್ತಕದ ಹೆಸರಿನ ಚಿಂತೆ ಬಿಡಿ. ಪುಸ್ತಕದ ಸಂಪಾದಕೀಯ ವಿಭಾಗಕ್ಕೆ ಸೇರಲು ಬಯಸುವವರು ಧಾರಾಳವಾಗಿ ಬಂದು ಸೇರಿ. ಇದನ್ನು ಓದಿದ ನಂತರ ಒಮ್ಮೆ “LIKE” ಮಾಡಿ “Superb bro” ಎಂದು comment ಬಿಟ್ಟಷ್ಟಕ್ಕೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಆಯಾ ಶೈಕ್ಷಣಿಕ ಸಾಲಿನ ಪ್ರತಿನಿಧಿಗಳು ತಮ್ಮ ಗೆಳೆಯ/ಗೆಳತಿಯರಿಗೆ ಈ ವಿಷಯವಾಗಿ ತಿಳಿಸಿ. “ಲೋ ಸಿಸ್ಯ, ಪುಸ್ತ್ಕ ಯಾವಾಗ್ಲ ಬಿಟ್ರು? ನಂಗು ಮೊದ್ಲೇ ಗೊತ್ತಾಗಿದ್ರೆ ಇದ್ರಪ್ಪನ್ನಂಗೆ ಬರಿತಿದ್ದೆ ಮಗ” ಎಂಬ ಉದ್ಗಾರಕ್ಕೆ ಎಡೆಮಾಡಿಕೊಡಬೇಡಿ. ಎಲ್ಲರಿಗೂ ತಿಳಿಸಿ ಹಾಗೂ ನಿಮ್ಮ ಸೃಜನಶೀಲ ಬರವಣಿಗೆಯನ್ನು ಸುವರ್ಣಾಕ್ಷರಗಳಲ್ಲಿ ಮುದ್ರಿಸಲು ಅನುವು ಮಾಡಿ. ಪುಸ್ತಕ ಹೀಗಿರಬೇಕು ಎಂಬ ಕ್ರಿಯಾತ್ಮಕ ಕಲ್ಪನೆಗಳು ಹಾಗೂ ಅಭಿಪ್ರಾಯಗಳು ಸ್ವಾಗತಾರ್ಹ.

ಕಳುಹಿಸಬೇಕಾದ e-ಅಂಚೆ ವಿಳಾಸ jnvhsjc@gmail.com ಅಥವಾ ನಿಮ್ಮ ಬರವಣಿಗೆಯ ಒಂದು ಪ್ರತಿಯನ್ನು ರಾಜು ರವರಿಗೆ (+ 91 9591814105) ತಲುಪಿಸಬಹುದು.


For any details regarding JNVH Silver Jubilee Magazine / Souvenir & you can contact the following members of the Magazine Committee. Alternatively you can also send / reach them for articles.

AaliSu Suresh Kumar : 9845165257 alisureshkumar@gmail.com
Arun Aathmeeya :9845505116 coolguyarun@gmail.com
RAJU S : 9591814105
Prapulla Puttachandra
Pavan Ar :9743445547 pavanalur@hotmail.com
Ganesh Prashanth
Mahendra N : 9164377759
Ashwini T Shivapadappa ashwini.ts89@gmail.com
Mohan V Kollegal 
Spoorthi Thammaiah 
Mahadev Prasad 9844604094


For more details visit https://www.facebook.com/groups/jnvians/




Comment / Share your thoughts here


Facebook Blogger Plugin: Bloggerized by AllBlogTools.com Enhanced by MyBloggerTricks.com